അഞ്ച് ലക്ഷം രൂപയ്ക്ക് ഒരു വീട്

Monday, 15 August 2016

smail Ullal 11 August 2015 · ಮರಣವು ಉತ್ತಮವಾದ ರೀತಿಯಲ್ಲಿ ಸಂಭವಿಸಿದ್ದರೆ ಅದನ್ನು ತಿಳಿದು ಕೊಳ್ಳುವ ಲಕ್ಷಣವು ಹದೀಸಿನಲ್ಲಿ ವಿವರಿಸಲಾಗಿದೆ... ಒಬ್ಬ ಮನುಷ್ಯನು ಮರಣ ಹೊಂದುತ್ತಿದ್ದಾಗ ಮೂರು ಲಕ್ಷಣಗಳ ಬಗ್ಗೆ ಗಮನ ಹರಿಸಿರಿ.ಆತನ ಹಣೆ ಬೆವರಿದರೆ, ಕಣ್ಣೀರು ಸುರಿದರೆ, ಮೂಗಿನ ದ್ವಾರಗಳು ಅಗಲವಾದರೆ ಅವನಿಗೆ ಅಲ್ಲಾಹುವಿನ ಅನುಗ್ರಹ ಉಂಟಾಗಿದೆ ಎಂದು ತಿಳಿದು ಕೊಳ್ಳ ಬಹುದಾಗಿದೆ. ಆತ ಇಕ್ಕಟ್ಟಿನಲ್ಲಿ ಸಿಲುಕಿದ ಒಂಟೆಯಂತೆ ಅರಚಿದರೆ ಅಥವಾ ವರ್ಣ ಮಂಕಾಗಿ ಮತ್ತು ಎರಡು ತುಟಿಗಳೆಡೆಯಿಂದ ನೊರೆ ಬಂದರೆ ಆತನಿಗೆ ಅಲ್ಲಾಹುವಿನ ಶಿಕ್ಲೆ ತಟ್ಟಿದೆ ಎಂದು ಊಹಿಸಬಹುದಾಗಿದೆ. ( ಹಾಕಿಂ ) ಮರಣದ ಸಮಯದಲ್ಲಿ : ಲಾ ಇಲಾಹ ಇಲ್ಲಲ್ಲಾಹ್; ಎಂಬ ಕಲಿಮಾವನ್ನು ನಿರರ್ಗಳವಾಗಿ ಹೇಳಲು ಸಾಧ್ಯವಾದರೆ ಆತನ ಮರಣವು ಉತ್ತಮವಾಗಿದೆ. ಎಂದು ತೀರ್ಮಾನಿಸಬಹುದು. ಅಲ್ಲಾಹು ಮತ್ತು ಮರಣದ ಬಗ್ಗೆ ಯಾವುದೇ ನೆನಪಿಲ್ಲದೇ ನಿರ್ಲಕ್ಲ್ಯನಾಗಿ ಪಾಪಗಳಲ್ಲಿ ಕಾಲಕಳೆದು ತೌಭಾ ಕೂಡಾ ಮಾಡದೇ ಸಾಯುವ ವ್ಯಕ್ತಿಗೆ ಪವಿತ್ರ ಕಲಿಮ ಹೇಳಲು ಸಾಧ್ಯವಾಗದೆಂದು ಹದೀಸ್ಗಳಿಂದಲೂ ಅನುಭವಗಳಿಂದಲೂ ಸಾಬೀತಾಗಿದೆ.. ವಿಶೇಷವಾಗಿ ತಾಯಿ ತಂದೆಯರಿಗೆ ದ್ರೋಹ, ನೆರೆಕರೆಯಲ್ಲಿ ಕಿರುಕುಳ ಅಳತೆ ತೂಕಗಳಲ್ಲಿ ಮೋಸ,ವ್ಯಭಿಚಾರ,ಬಡ್ಡಿ ನಮಾಝಿನ ಬಗ್ಗೆ ನಿರ್ಲಕ್ಷ್ಯ ಮುಂತಾದ ಮಹಾ ಪಾಪಗಳಲ್ಲಿ ಕಳೆಯುತ್ತಿರುವ ಜನರು ಸಾಯುವ ವೇಳೆ ಕಲಿಮ ಹೇಳಲು ಸಾಧ್ಯವಾಗುವುದಿಲ್ಲವೆಂದು ಇಮಾಮ್ ಸುಯೂತಿ ( ರ) ರಂತಹ ಉಲಮಾಗಳು ಪ್ರಸ್ತಾಪಿಸಿದ್ದಾರೆ. ಕೆಲವು ವಿಷಯಗಳ ಬಗ್ಗೆ ಪ್ರತ್ಯೇಕ ಪ್ರೀತಿಯಿಟ್ಟು ಅದನ್ನು ನಿತ್ಯ ಹೇಳುತ್ತಾ ಇದ್ದರೆ ಮರಣದ ವೇಳೆ ಅದನ್ನೇ ಹೇಳುವುದನ್ನು ಕಾಣಬಹುದಾಗಿದೆ.ಆದುದರಿಂದ ಯಾವಾಗಲೂ ಅಲ್ಲಾಹುವಿನ ಬಗ್ಗೆ ಸ್ಮರಣೆ ಮತ್ತು ಪರಿಶುಧ್ದ ವಚನ ಕಲಿಮಾವನ್ನು ಯಾವಾಗಲೂ ಹೇಳುತ್ತಾ ಇರುವುದು ಅವಶ್ಯವಾಗಿದೆ.ಕೊನೆಯದಾಗಿ ಪರಿಶುಧ್ಧವಾದ ಕಲಿಮಾವನ್ನು ಉಚ್ಛರಿಸಿ ಮರಣ ಹೊಂದುವ ಸೌಭಾಗ್ಯವಂತರ ಕೂಟದಲ್ಲಿ ನಮ್ಮನ್ನು ಅಲ್ಲಾಹು ಸೇರಿಸಲಿ..ಆಮೀನ್.... ಇತೀ ನಿಮ್ಮ ಇಸ್ಮಾಈಲ್..